“ಈಶ ಎಂದರೆ ಸೃಷ್ಟಿಯ ಮೂಲ ಎಂದು ಅರ್ಥ.
ಕ್ರಿಯ ಎಂದರೆ ಸೃಷ್ಟಿಯ ಮೂಲದೆಡೆಗೆ ಸಾಗುವ ಕಾರ್ಯ. ಈಶ ಕ್ರಿಯ
ಎಂಬುದು ಅಸತ್ಯದಿಂದ ಸತ್ಯದೆಡೆಗೆ ಸಾಗಲು ನೆರವಾಗುವ ಸರಳ ಹಾಗೂ ಶಕ್ತಿಯುತವಾದ ಒಂದು ಸಾಧನವಾಗಿದೆ.”

- ಸದ್ಗುರು

ಸುಖ-ಸಂತೋಷಕ್ಕೆ ತಂತ್ರಜ್ಞಾನಗಳು

ಮುಂದೇನು?

ಈಶಯೋಗ ಪರಿಚಯ ಕಾರ್ಯಕ್ರಮಗಳು

ಈಶ ಪ್ರತಿಷ್ಠಾನವು,ಆಧ್ಯಾತ್ಮಿಕ ಸೌಖ್ಯವನ್ನು ಸಾಧಿಸುವ ನಿಟ್ಟಿನಲ್ಲಿ ಅನೇಕ ಸಾಧನಕ್ರಮಗಳು ಹಾಗೂ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ಇನ್ನರ್ ಇಂಜಿನಿಯರಿಂಗ್ ಎಂಬುದು ಒಂದು ತೀವ್ರತರ ಕಾರ್ಯಕ್ರಮವಾಗಿದ್ದು, ಪ್ರತಿಯೊಬ್ಬರೂ ತಮ್ಮನ್ನು ತಾವು ಮರು-ವಿನ್ಯಾಸಗೊಳಿಸಿಕೊಳ್ಳುವ ಸಾಧನಕ್ರಮಗಳನ್ನು ಒಳಗೊಂಡಿದ್ದು, ಜೀವನದ ಉನ್ನತಸ್ತರಗಳನ್ನು ತಲುಪಲು ಅವಕಾಶ ಮಾಡಿಕೊಡುತ್ತದೆ.ಈ ಕಾರ್ಯಕ್ರಮವು ಅಂತರ್ಜಾಲದಲ್ಲಿ ಕೂಡ ಲಭ್ಯವಿದೆ.www.innerengineering.com

ಹಠಯೋಗ ಎಂಬುದು ವೈಜ್ಞಾನಿಕವಾಗಿ ವಿನ್ಯಾಸಗೊಳಿಸಿದ ಆಸನಗಳ ಕಾರ್ಯಕ್ರಮವಾಗಿದ್ದು, ಶರೀರ ಮತ್ತು ಮನಸ್ಸಿನ ಮೇಲೆ ನಿರ್ದಿಷ್ಟ ಹತೋಟಿಯನ್ನು ಸಾಧಿಸಿ, ವ್ಯಕ್ತಿಯ ಜೀವನದ ಅನುಭವವನ್ನು ವೃದ್ಧಿಗೊಳಿಸುತ್ತದೆ.

ಮಕ್ಕಳಿಗಾಗಿ ಈಶಯೋಗ ಕಾರ್ಯಕ್ರಮವು ಸೃಜನಶೀಲ ಕಲೆ, ಕ್ರೀಡೆ ಮತ್ತು ಯೋಗಾಭ್ಯಾಸವನ್ನು ಒಳಗೊಂಡಿದ್ದು, ಮಕ್ಕಳಲ್ಲಿ ಏಕಾಗ್ರತೆ, ನೆನಪಿನಶಕ್ತಿ, ಕೇಂದ್ರೀಕರಣ ಸಾಮರ್ಥ್ಯ ಮತ್ತು ಶರೀರ-ಮನಸ್ಸಿನ ಸಂಯೋಜನೆಯನ್ನು ಉತ್ತಮಪಡಿಸುತ್ತದೆ.

ಲಾಭಗಳು

ಆರೋಗ್ಯ

 • ಆರೋಗ್ಯ ಮತ್ತು ಬಲವೃದ್ಧಿ
 • ಒತ್ತಡ ನಿವಾರಣೆ
 • ಮಾನಸಿಕ ಸ್ಪಷ್ಟತೆ ಮತ್ತು ಭಾವನಾತ್ಮಕ ಸಮತೋಲನ
 • ದಿನವಿಡೀ ಉನ್ನತ ಮಟ್ಟದ ಶಕ್ತಿಯ ಅನುಭವ
 • ನಿದ್ರೆ ಮತ್ತು ವಿಶ್ರಾಂತಿಯ ಅವಧಿ ಕಡಿತ
 • ದೀರ್ಘಕಾಲೀನ ಕಾಯಿಲೆಗಳಾದ ಅಸ್ತಮಾ, ಅಲರ್ಜಿ, ಸೈನುಸೈಟಿಸ್, ರಕ್ತದ ಒತ್ತಡ, ಮಧುಮೇಹ, ಬೊಜ್ಜು, ಸಂಧಿವಾತ, ಮೂರ್ಛೆರೋಗ, ಬೆನ್ನುನೋವು, ಚರ್ಮ ಮತ್ತು ಕಣ್ಣಿನ ಕಾಯಿಲೆಗಳು, ಮೈಗ್ರೇನ್ ಮುಂತಾದವುಗಳ ತಡೆಗಟ್ಟುವಿಕೆ.

ಸಾಮರ್ಥ್ಯವೃದ್ಧಿ

 • ಒತ್ತಡಭರಿತ ಪರಿಸ್ಥಿತಿಗಳನ್ನು ನಿರ್ವಹಿಸುವ ಸಾಮರ್ಥ್ಯವೃದ್ಧಿ
 • ಏಕಾಗ್ರತೆ ಮತ್ತು ನೆನಪಿನಶಕ್ತಿಯ ವೃದ್ಧಿ
 • ಹೆಚ್ಚಿನ ಉತ್ಪಾದಕತೆ ಮತ್ತು ಕಾರ್ಯಕ್ಷಮತೆ
 • ಸಂವಹನ ಮತ್ತು ಮಾನವ ಸಂಬಂಧಗಳ ವೃದ್ಧಿ
 • ದಿನಪೂರ್ತಿ ಉತ್ತಮ ಕಾರ್ಯಸಾಮರ್ಥ್ಯ

ಅನುಭವ

 • ಜೀವನದೆಡೆಗೆ ಧನಾತ್ಮಕ ಮತ್ತು ಮುಕ್ತ ದೃಷ್ಟಿಕೋನ
 • ವೈಯಕ್ತಿಕ ಮೌಲ್ಯಗಳು ಮತ್ತು ಜೀವನದ ಗುರಿಗಳ ಮೌಲ್ಯಮಾಪನ
 • ಆಂತರಿಕ ಶಾಂತಿ ಮತ್ತು ತೃಪ್ತಿಯ ವೃದ್ಧಿ
 • ಮಿತಿಗಳು ಹಾಗೂ ಭಯವನ್ನು ಮೀರುವಿಕೆ
 • ಪ್ರತಿಕ್ಷಣವನ್ನೂ ಪೂರ್ಣವಾಗಿ ಅನುಭವಿಸಿ ಜೀವಿಸುವಿಕೆ

ಈಶದ ಮುಂಚೂಣಿ ಕಾರ್ಯಕ್ರಮವು ಶಕ್ತಿಯುತ, ಪ್ರಾಚೀನ ಯೋಗ ಪದ್ಧತಿಯ ಸಾರವನ್ನು ಒಳಗೊಂಡಿದ್ದು, ಆಧುನಿಕ ಮನುಷ್ಯನ ಶರೀರ, ಮನಸ್ಸು ಮತ್ತು ಭಾವನೆಗಳಲ್ಲಿ ಸಾಮರಸ್ಯವನ್ನು ಸೃಷ್ಟಿಸುತ್ತದೆ. ಈ ಕಾರ್ಯಕ್ರಮದಲ್ಲಿ, ಆಳವಾದ ಆಂತರಿಕ ಪರಿವರ್ತನೆಯನ್ನು ತರುವ “ಶಾಂಭವಿ ಮಹಾಮುದ್ರಾ” ಎಂಬ ಸರಳ ಹಾಗೂ ಶಕ್ತಿಯುತ ಕ್ರಿಯೆ(ಆಂತರಿಕ ಶಕ್ತಿಕ್ರಿಯೆ)ಯನ್ನು ಬೋಧಿಸಲಾಗುತ್ತದೆ.

ಇನ್ನೂ ಓದಿ

ಇನ್ನರ್ ಇಂಜಿನಿಯರಿಂಗ್ ಅಂತರ್ಜಾಲ ತರಗತಿಗೆ ಸೇರಿರಿ. Innerengineering.com

ಮುಂಬರುವ ಇನ್ನರ್ ಇಂಜಿನಿಯರಿಂಗ್ ಕಾರ್ಯಕ್ರಮಗಳ ಬಗ್ಗೆ ತಿಳಿಯಿರಿ:
ಭಾರತದಲ್ಲಿ ಯುಎಸ್‌ಎಯಲ್ಲಿ ಬೇರೆಡೆ

ಹಠಯೋಗ

ಹಠಯೋಗ, ನಮ್ಮ ಕೇಂದ್ರಗಳಲ್ಲಿ ನಡೆಯುವ ೩-೪ ದಿನಗಳ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು, ಕೇಂದ್ರದಲ್ಲೇ ತಂಗಲು ವ್ಯವಸ್ಥೆ ಇದೆ. ಸೂರ್ಯನಮಸ್ಕಾರದೊಂದಿಗೆ ಹಲವಾರು ಆಸನಗಳನ್ನು ಕಲಿಯಲು ಇದೊಂದು ಅಪೂರ್ವ ಅವಕಾಶವಾಗಿದೆ.ಈ ಕಾರ್ಯಕ್ರಮಕ್ಕೆ ಸೇರಲು ನಿರ್ದಿಷ್ಟ ಶಾರೀರಿಕ ಕ್ಷಮತೆ ಅಥವಾ ಯೋಗದ ಪೂರ್ವ ಅನುಭವದ ಅಗತ್ಯವಿಲ್ಲ.

ಇನ್ನೂ ಹೆಚ್ಚು ತಿಳಿದುಕೊಳ್ಳಿ | ಮುಂಬರುವ ಕಾರ್ಯಕ್ರಮಗಳನ್ನು ನೋಡಿ

ಮಕ್ಕಳಿಗಾಗಿ ಯೋಗ

(7-14 ವರ್ಷ) ಇದೊಂದು 5 ದಿನಗಳ ಕಾರ್ಯಕ್ರಮವಾಗಿದ್ದು, ಮಕ್ಕಳ ನೆನಪಿನ ಶಕ್ತಿ ಮತ್ತು ಏಕಾಗ್ರತೆಯನ್ನು ವೃದ್ಧಿಸುತ್ತದೆ.ಈ ಕಾರ್ಯಕ್ರಮವು ಮಕ್ಕಳ ಶಕ್ತಿಯನ್ನು ಸಮತೋಲನಗೊಳಿಸಿ, ಅವರನ್ನು ಜವಾಬ್ದಾರಿಯುತ, ಆನಂದಭರಿತ ಮತ್ತು ಪ್ರೇಮಭರಿತ ಜೀವಿಗಳನ್ನಾಗಿ ಪರಿವರ್ತಿಸುತ್ತದೆ.

ಇನ್ನೂ ಹೆಚ್ಚು ತಿಳಿದುಕೊಳ್ಳಿ | ಮುಂಬರುವ ಕಾರ್ಯಕ್ರಮಗಳನ್ನು ನೋಡಿ

 
 
ISHA FOUNDATION
Isha Foundation - © 1997 - 2023 Isha Foundation. All Rights Reserved.
Site MapFeedbackContact UsInternational Yoga DayGuru Purnima 2019 View our Privacy Policy