“ಈಶ ಎಂದರೆ ಸೃಷ್ಟಿಯ ಮೂಲ ಎಂದು ಅರ್ಥ.
ಕ್ರಿಯ ಎಂದರೆ ಸೃಷ್ಟಿಯ ಮೂಲದೆಡೆಗೆ ಸಾಗುವ ಕಾರ್ಯ. ಈಶ ಕ್ರಿಯ
ಎಂಬುದು ಅಸತ್ಯದಿಂದ ಸತ್ಯದೆಡೆಗೆ ಸಾಗಲು ನೆರವಾಗುವ ಸರಳ ಹಾಗೂ ಶಕ್ತಿಯುತವಾದ ಒಂದು ಸಾಧನವಾಗಿದೆ.”

- ಸದ್ಗುರು

ಸುಖ-ಸಂತೋಷಕ್ಕೆ ತಂತ್ರಜ್ಞಾನಗಳು

ಈಶಕ್ರಿಯೆಯ ಕುರಿತು ಜನರು ಏನು ಹೇಳುತ್ತಾರೆ

"ನಾನು ಈಶಕ್ರಿಯೆಯನ್ನು ಕಳೆದು ಐದು ತಿಂಗಳಿನಿಂದ ಅಭ್ಯಾಸ ಮಾಡುತ್ತಿದ್ದೇನೆ ಮತ್ತು ನಾನು ಕಂಡ ಬದಲಾವಣೆಗಳು ಗಣನೀಯವಾಗಿವೆ.ನಾನು ಈಗ ಕಡಿಮೆ ಯೋಚಿಸುತ್ತಿದ್ದೇನೆ ಹಾಗೂ ಹಲವಾರು ವಿಷಯಗಳ ಕುರಿತು “ಯಾಕೆ” ಎಂಬ ಪ್ರಶ್ನೆಯ ಅಗತ್ಯವೇ ಕಡಿಮೆಯಾಗಿಬಿಟ್ಟಿದೆ.ಜೀವನವು ಹೆಚ್ಚು ಸುಸೂತ್ರ ಹಾಗೂ ಸಂಘರ್ಷರಹಿತವೆನಿಸುತ್ತಿದೆ. " - ಮೇರಿ, ಕೊಲೊರಾಡೋ, ಯುಎಸ್‌ಎ

“ ನಾನು ಇದೀಗ ತಾನೆ ಈಶ ಕ್ರಿಯವನ್ನು ಅಭ್ಯಾಸಮಾಡಿದೆ.ಮತ್ತು ಸದ್ಗುರುಗಳೊಂದಿಗೆ ಈ ಧ್ಯಾನಕ್ರಮವು ಎಷ್ಟು ಶಕ್ತಿಯುತವಾಗಿದೆ ಎಂಬುದನ್ನು ತಿಳಿದು ತುಂಬಾ ಅಚ್ಚರಿಯಾಯಿತು.ಅಂತರ್ಜಾಲದ ಮೂಲಕವೂ ಸಹ ಇದು ಪರಿಣಾಮಕಾರಿಯಾಗಿದೆ.ನಾನು ಖಂಡಿತವಾಗಿಯೂ ಶಾಂತಿ, ಸಮತೋಲನ ಮತ್ತು ನಿರ್ಲಿಪ್ತತೆಯನ್ನು ಅನುಭವಿಸಿದೆ." – ಓಲ್ಗಾ ಅವಿಲಾ, ಹೋಲೆಂಡ್

" ನಾನು ಇಂದು ಈಶಕ್ರಿಯೆಯನ್ನು ಮಾಡುತ್ತಿರುವಂತೆಯೇ ನನ್ನ ಕಣ್ಣುಗಳು ತುಂಬಿಬಂದವು? ಅದನ್ನು ಇನ್ನಷ್ಟು ಸಮಯ ಆನಂದಿಸಬೇಕೆಂಬ ಒಂದು ರೀತಿಯ ಪ್ರಚೋದನೆಯುಂಟಾಯಿತು." – ಅಪರ್ಣ, ಭಾರತ

" ಸದ್ಗುರು, ನನಗೆ ಸಹಾಯ ಮಾಡಿದ್ದಕ್ಕೆ ಧನ್ಯವಾದಗಳು.ನಾನು ಜುಲೈನಲ್ಲಿ ಫ್ಲೋರಿಡಾದಲ್ಲಿ ಇನ್ನರ್ ಇಂಜಿನಿಯರಿಂಗ್ ತರಗತಿಯನ್ನು ಮುಗಿಸಿದ ನಂತರ ಶಾಂತಿಯುತ ಜೀವನವನ್ನು ಮಾಡುತ್ತಿದ್ದೆ. ಆದರೆ, ಡಿಸೆಂಬರ್‌ನಲ್ಲಿ ನನಗೆ ಬದಲಿ ಮೊಳಕಾಲು ಶಸ್ತ್ರಚಿಕಿತ್ಸೆ ಆದಾಗ, ನನ್ನ ಶರೀರ ಮತ್ತು ಮನಸ್ಸನ್ನು ನಿರ್ವಹಿಸುವುದು ತುಂಬಾ ಕಷ್ಟಕರವಾಯಿತು.ಈಶಕ್ರಿಯೆಯ ವಿಧಾನವನ್ನು ಕೇಳುತ್ತಿದ್ದಂತೆಯೇ ಮತ್ತೆ ಅದೇ ಶಾಂತಿಯನ್ನು ಅನುಭವಿಸಲು ಸಾಧ್ಯವಾಯಿತು." – ಗಿಲ್ ಜೋನ್ಸ್, ಯುಎಸ್‌ಎ

" ಕ್ರಿಯೆಯು ವಿಸ್ಮಯಕಾರಿಯಾಗಿದ್ದು, ಅತ್ಯಂತ ಸೂಕ್ಷ್ಮ ಹಾಗೂ ಸರಳವಾಗಿದ್ದು, ಆಳವಾದ ವಿಶ್ರಾಂತಿ ನೀಡಿ, ಸುಲಭವಾಗಿ ಸಚೇತನಗೊಳಿಸುತ್ತದೆ.ಇದು ಶಾಂಭವಿ, ಶಕ್ತಿಚಾಲನಕ್ರಿಯೆ ಮತ್ತು ಶೂನ್ಯದ ನಡುವೆ ಅಭ್ಯಾಸ ಮಾಡಲು ಸುಲಭವಾಗಿ ಹೊಂದಿಕೆಯಾಗುತ್ತದೆ." – ನಾದೇಶ್, ಪೀಡಿಯಾಟ್ರಿಕ್ ಸರ್ಜನ್, ಮಲೇಶಿಯ

" ನಾನು ಈ ವರ್ಷದ ಮಾರ್ಚ್‌ನಲ್ಲಿ, ಒಬ್ಬ ಸ್ನೇಹಿತನ ಸಲಹೆಯ ಮೇರೆಗೆ ಸದ್ಗುರುರವರ ಪ್ರವಚನವನ್ನು ಕೇಳಲು ಹೋದೆ. ನನಗೆ ಯೋಗದ ಬಗ್ಗೆ ಅಲ್ಪಸ್ವಲ್ಪ ಗೊತ್ತಿತ್ತಾದರೂ, ಧಾನ್ಯದ ಅನುಭವವಿರಲಿಲ್ಲ.ಅವರು ಕಲಿಸಿದ ಧ್ಯಾನದ ಅನುಭವವು ವಿಸ್ಮಯಕಾರಿಯಾಗಿತ್ತು.ನನಗೆ ದೊರೆತ ಆ ಒಂದು ಧ್ಯಾನದ ಸಣ್ಣ ಅವಕಾಶವು ನನ್ನ ಜೀವನದಲ್ಲಿ ಬಂದ ಕಷ್ಟಕರ ಸನ್ನಿವೇಶವನ್ನು ನಾನು ಅಂದುಕೊಂಡಿದ್ದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸುವ ಸಾಮರ್ಥ್ಯವನ್ನು ತಂದುಕೊಟ್ಟಿತು. ಹಾಸ್ಯಪ್ರಜ್ಞೆ ಮತ್ತು ಉತ್ತಮ ಜೀವನದೃಷ್ಟಿ ಹೊಂದಿರುವ ಸದ್ಗುರು ಅವರಿಂದ ತಿಳಿದುಕೊಳ್ಳುವ ಪ್ರಯತ್ನವನ್ನು ಎಲ್ಲರೂ ಮಾಡುವರೆಂದು ಭಾವಿಸುತ್ತೇನೆ." - ಅಲಿಡಾ ಹೋರ್ನೆ, ಕಾನೂನು ಕಾರ್ಯದರ್ಶಿ, ಪೆನ್ಸಿಲ್ವೇನಿಯ, ಯುಎಸ್‌ಎ

ನಿಮ್ಮ ಈಶಕ್ರಿಯೆಯ ಅನುಭವವನ್ನು ಹಂಚಿಕೊಳ್ಳಿ

 
 
ISHA FOUNDATION
Isha Foundation - © 1997 - 2023 Isha Foundation. All Rights Reserved.
Site MapFeedbackContact UsInternational Yoga DayGuru Purnima 2019 View our Privacy Policy