ಈಶ ಕ್ರಿಯ ಎಂದರೆ ಏನು?
ಇಂದು, ಬಹುತೇಕ ಜನರಲ್ಲಿ, “ಯೋಗ” ಎಂದರೆ ಶರೀರವನ್ನು ಅಸಾಧ್ಯ ಭಂಗಿಗಳಿಗೆ ತಿರುಚುವುದು ಎಂಬ ಅಭಿಪ್ರಾಯವಿದೆ.ಯೋಗ ಎಂಬುದು ಒಂದು ಬಹುಆಯಾಮಗಳ ವಿಜ್ಞಾನವಾಗಿದ್ದು, ಅದರಲ್ಲಿ ಶಾರೀರಿಕ ಭಂಗಿಗಳು ಕೇವಲ ಒಂದು ಆಯಾಮವಾಗಿದೆ.ಯೋಗವೆಂಬುದು ಶರೀರ ಮತ್ತು ಮನಸ್ಸುಗಳ ಪೂರ್ಣ ಸಾಮರ್ಥ್ಯವನ್ನು ವಿಕಾಸಗೊಳಿಸಿ, ಆ ಮೂಲಕ ವ್ಯಕ್ತಿಯು ತನ್ನ ಜೀವನವನ್ನು ಪೂರ್ಣವಾಗಿ ಜೀವಿಸುವಂತೆ ಮಾಡುವ ಒಂದು ತಂತ್ರಜ್ಞಾನವಾಗಿದೆ.
ಪ್ರತಿಯೊಬ್ಬರಿಗೂ - ಒಂದು ಹನಿ - ಆಧ್ಯಾತ್ಮಿಕತೆಯನ್ನು ತಲುಪಿಸಬೇಕೆಂಬುದು, ಯೋಗಿ ಹಾಗೂ ಗುರುಗಳಾದ ಸದ್ಗುರುಗಳ ಆಶಯವಾಗಿದೆ.ಹಿಂದೆ, ಯೋಗಿಗಳಿಗೆ ಮತ್ತು ಸಾಧುಸಂತರಿಗೆ ಮಾತ್ರ ಲಭ್ಯವಾಗುತ್ತಿದ್ದ ಆಧ್ಯಾತ್ಮಿಕ ಪ್ರಕ್ರಿಯೆಗಳು, ಇದೀಗ ಈಶಕ್ರಿಯೆಯ ಮೂಲಕ ಪ್ರತಿಯೊಬ್ಬರಿಗೂ ಲಭ್ಯವಾಗುವಂತೆ ಅವರ ಮನೆಗೇ ತಲುಪಿಸಲಾಗುತ್ತಿದೆ.
ಯೋಗಿಕ ವಿಜ್ಞಾನಗಳ ಸನಾತನ ಜ್ಞಾನವನ್ನು ಆಧರಿಸಿದ ಈಶಕ್ರಿಯೆಯು, ಸದ್ಗುರುಗಳೇ ವಿನ್ಯಾಸಮಾಡಿರುವ ಒಂದು ಸರಳ ಹಾಗೂ ಶಕ್ತಿಯುತವಾದ ಸಾಧನ ಕ್ರಮವಾಗಿದೆ. “ಈಶ” ಎಂದರೆ ಸೃಷ್ಟಿಯ ಮೂಲ: “ಕ್ರಿಯ” ಎಂದರೆ “ಆಂತರಿಕ ಕ್ರಮ”. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಅಸ್ತಿತ್ವಕ್ಕೆ ಕಾರಣವಾಗಿರುವ ’ತತ್ವದ’ ಸಂಪರ್ಕವನ್ನು ಸಾಧಿಸಿ, ತನ್ನ ಜೀವನವನ್ನು ತನ್ನ ಆಶಯದಂತೆ ರೂಪಿಸಿಕೊಳ್ಳಲು ಸಾಧ್ಯವಾಗುವಂತೆ ಮಾಡುವುದೇ ಈಶಕ್ರಿಯೆಯ ಧ್ಯೇಯವಾಗಿದೆ. ಈಶಕ್ರಿಯೆಯ ನಿಯಮಿತ ಅಭ್ಯಾಸವು ನಿಮ್ಮ ಜೀವನದಲ್ಲಿ ಆರೋಗ್ಯ, ಶಾಂತಿ, ಆನಂದ ಹಾಗೂ ದಕ್ಷತೆಯನ್ನು ತರುವುದು. ಆಧುನಿಕ ಜೀವನಕ್ರಮದ ಒತ್ತಡಭರಿತ ದಿನಚರಿಯನ್ನು ನಿರ್ವಹಿಸಲು ಇದೊಂದು ಪರಿಣಾಮಕಾರಿ ಸಾಧನವಾಗಿದೆ.
ಈಶ ಕ್ರಿಯವು ಸುಲಭವಾಗಿ ಅಭ್ಯಾಸ ಮಾಡಬಹುದಾದ ಸರಳ ಸಾಧನಕ್ರಮವಾಗಿದ್ದು, ಎಲ್ಲರಿಗೂ ಉಚಿತವಾಗಿ ಲಭ್ಯವಿದೆ. ನಿರ್ದೇಶಿತ ಧ್ಯಾನಕ್ರಮವಾದ ಈ ಕ್ರಿಯೆಯು, ಸೂಚನೆಗಳಿಂದ ಕೂಡಿದ ವಿಡಿಯೋ ಹಾಗೂ ಡೌನ್ ಲೋಡ್ ಮಾಡಿಕೊಳ್ಳಬಹುದಾದ ಸೂಚನೆಗಳ ಪಟ್ಟಿಯೊಂದಿಗೆ ಲಭ್ಯವಿದೆ.ಪ್ರತಿನಿತ್ಯ ಕೆಲವು ನಿಮಿಷಗಳ ಸಮಯವನ್ನು ಅಭ್ಯಾಸಕ್ಕಾಗಿ ವಿನಿಯೋಗಿಸಲು ಇಚ್ಛಿಸುವವರ ಜೀವನವನ್ನು ಆಮೂಲಾಗ್ರವಾಗಿ ಪರಿವರ್ತಿಸಬಲ್ಲ ಸಾಮರ್ಥ್ಯವನ್ನು ಈ ಕ್ರಿಯೆಯು ಹೊಂದಿದೆ.
ಸದ್ಗುರುಗಳನ್ನು ಕುರಿತು
ಭೇಟಿ ನೀಡಿ Isha.Sadhguru.org
ಭೇಟಿ ನೀಡಿ IshaFoundation.org
ಯೋಗಿ, ಅನುಭಾವಿ, ದಾರ್ಶನಿಕ ಹಾಗೂ ಕವಿ ಎನಿಸಿರುವ ಸದ್ಗುರುಗಳು ಓರ್ವ ವಿಭಿನ್ನ ಆಧ್ಯಾತ್ಮಿಕ ಗುರುಗಳು. ಅವರ ಜೀವನ ಮತ್ತು ಸಾಧನೆಯು, ಪ್ರತಿಯೊಬ್ಬ ವ್ಯಕ್ತಿಯ ಆಂತರ್ಯದಲ್ಲಿ ಹುದುಗಿರುವ ಶಾಂತಿ ಮತ್ತು ಸಂತೋಷವನ್ನು ಪ್ರತಿ ಮನುಷ್ಯನೂ ಅನುಭವಕ್ಕೆ ತಂದುಕೊಳ್ಳುವ ಸಾಧ್ಯತೆಯಾಗಿದೆ. ಪ್ರತಿಯೊಬ್ಬರೂ “ಒಂದು ಹನಿ ಆಧ್ಯಾತ್ಮಿಕತೆ”ಯನ್ನು ಪಡೆದುಕೊಂಡು ಆ ಮೂಲಕ ತಮ್ಮ ಜೀವನವನ್ನು ಪರಿವರ್ತಿಸಿಕೊಂಡು, ತಮ್ಮ ವಿಧಿಯನ್ನು ತಾವೇ ನಿರ್ಧರಿಸುವಂತಾಗಬೇಕೆಂಬುದು ಸದ್ಗುರುಗಳ ಆಶಯವಾಗಿದೆ.
ನಮ್ಮ ಪ್ರಾಯೋಜಕರು
ಈಶಕ್ರಿಯೆಯ ಕುರಿತು ಜನರು ಏನು ಹೇಳುತ್ತಾರೆ?
" ಸದ್ಗುರು, ನನಗೆ ಸಹಾಯ ಮಾಡಿದ್ದಕ್ಕೆ ಧನ್ಯವಾದಗಳು.ನಾನು ಜುಲೈನಲ್ಲಿ ಫ್ಲೋರಿಡಾದಲ್ಲಿ ಇನ್ನರ್ ಇಂಜಿನಿಯರಿಂಗ್ ತರಗತಿಯನ್ನು ಮುಗಿಸಿದ ನಂತರ ಶಾಂತಿಯುತ ಜೀವನವನ್ನು ಮಾಡುತ್ತಿದ್ದೆ.ಆದರೆ, ಡಿಸೆಂಬರ್ನಲ್ಲಿ ನನಗೆ ಬದಲಿ ಮೊಳಕಾಲು ಶಸ್ತ್ರಚಿಕಿತ್ಸೆ ಆದಾಗ, ನನ್ನ ಶರೀರ ಮತ್ತು ಮನಸ್ಸನ್ನು ನಿರ್ವಹಿಸುವುದು ತುಂಬಾ ಕಷ್ಟಕರವಾಯಿತು.ಈಶಕ್ರಿಯೆಯ ವಿಧಾನವನ್ನು ಕೇಳುತ್ತಿದ್ದಂತೆಯೇ ಮತ್ತೆ ಅದೇ ಶಾಂತಿಯನ್ನು ಅನುಭವಿಸಲು ಸಾಧ್ಯವಾಯಿತು."
– ಗಿಲ್ ಜೋನ್ಸ್, ಯುಎಸ್ಎ.
“ ನಾನು ಇದೀಗ ತಾನೆ ಈಶ ಕ್ರಿಯವನ್ನು ಅಭ್ಯಾಸಮಾಡಿದೆ.ಮತ್ತು ಈ ಧ್ಯಾನಕ್ರಮವು ಎಷ್ಟು ಶಕ್ತಿಯುತವಾಗಿದೆ ಎಂಬುದನ್ನು ತಿಳಿದು ತುಂಬಾ ಅಚ್ಚರಿಯಾಯಿತು.ಅಂತರ್ಜಾಲದ ಮೂಲಕವೂ ಸಹ ಇದು ಪರಿಣಾಮಕಾರಿಯಾಗಿದೆ.ನಾನು ಖಂಡಿತವಾಗಿಯೂ ಶಾಂತಿ, ಸಮತೋಲನ ಮತ್ತು ವೈರಾಗ್ಯ ಭಾವವನ್ನು ಅನುಭವಿಸಿದೆ."
– ಓಲ್ಗಾ ಅವಿಲಾ, ಹೋಲೆಂಡ್
ಇನ್ನೂ ಓದಿ